‘ಓಂ’ ಸಿನಿಮಾದ ಡಾನ್ ರಾಯ್ ಪಾತ್ರದಿಂದಿಡಿದು ‘ಕೆಜಿಎಫ್’ ಚಾಚಾ ಪಾತ್ರದದ ತನಕ ಹರೀಶ್ ರಾಯ್ ಕನ್ನಡ ಚಿತ್ರರಂಗದಲ್ಲಿ ವಿವಿಧ ರೀತಿಯ ರೋಲ್ಗಳಲ್ಲಿ ಮಿಂಚಿದವರು. ಪೋಷಕ ಪಾತ್ರ, ವಿಲನ್ ಹೀಗೆ ಹರೀಶ್ ರಾಯ್ ತಮ್ಮದೇ ಆದ ಒಂದು ಇಮೇಜ್ ಬಿಲ್ಡ್ ಮಾಡಿಕೊಂಡಿದ್ದರು. ಇಂತಹ ಜನಪ್ರಿಯ ನಟ ಗುರುವಾರ (ನ.6) ಕಿದ್ವಾಯಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಫಲಕಾರಿಯಾಗದ ಚಿಕಿತ್ಸೆ
ಕೆಲ ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹರೀಶ್ ರಾಯ್, ಅದರ ವಿರುದ್ಧ ಹೋರಾಡಲು ವಿಫಲರಾಗಿ ಸಾವನ್ನಪ್ಪಿದ್ದಾರೆ. ಥೈರಾಯ್ಡ್ ಕ್ಯಾನ್ಸರ್ಗಾಗಿ ಹರೀಶ್ ರಾಯ್ ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕಾಗಿ ಹಣ ಸಹಾಯವನ್ನ ಕೂಡ ಎದುರು ನೋಡುತ್ತಿದ್ದರು. ಶಿವಣ್ಣ, ಧ್ರುವ ಸರ್ಜಾ ಸೇರಿದಂತೆ ಅನೇಕರು ಧನ ಸಹಾಯ ಮಾಡಿದ್ದರು. ಅವರಿಗೆ ದುಬಾರಿ ಬೆಲೆಯ 17 ಇಂಜೆಕ್ಷನ್ಗಳ ಅವಶ್ಯಕತೆ ಇತ್ತು. ಅದಕ್ಕಾಗಿ ಅವರಿಗೆ ಸುಮಾರು 70 ಲಕ್ಷಕ್ಕೂ ಅಧಿಕ ರೂಪಾಯಿಗಳ ಅಗತ್ಯವಿತ್ತು. ಒಂದು ಇಂಜೆಕ್ಷನ್ನ ಬೆಲೆ 3.50 ಲಕ್ಷ ರೂ. ಎಂದು ಹೇಳಲಾಗಿತ್ತು.
ಈಚೆಗೆ ಅವರಿಗೆ ಒಂದು ಇಂಜೆಕ್ಷನ್ ನೀಡಲಾಗಿತ್ತು. ಆದರೆ ಇಂಜೆಕ್ಷನ್ಗೆ ಅವರ ದೇಹ ಸಹಕರಿಸದೇ ಇರುವ ಕಾರಣ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದ ಅವರನ್ನ ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ನ.6) ಆಸ್ಪತ್ರೆಯಲ್ಲಿಯೇ ಹರೀಶ್ ರಾಯ್ ಅವರು ಸಾವನ್ನಪ್ಪಿದ್ದಾರೆ. 55 ವರ್ಷದ ಹರೀಶ್ ರಾಯ್ ಅವರು ಪತ್ನಿ ಹಾಗೂ ಓರ್ವ ಮಗನನ್ನು ಅಗಲಿದ್ದಾರೆ. ಹರೀಶ್ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು, ಆಪ್ತರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಮತ್ತು ತಮಿಳಿನಲ್ಲಿ ನಟಿಸಿದ್ದ ಕಲಾವಿದ
ಶಿವರಾಜ್ಕುಮಾರ್ & ಉಪೇಂದ್ರ ಕಾಂಬಿನೇಷನ್ ‘ಓಂ’ ಸಿನಿಮಾದಲ್ಲಿ ಡಾನ್ ರಾಯ್ ಪಾತ್ರ ಮಾಡಿ ಫೇಮಸ್ ಆಗಿದ್ದ ಹರೀಶ್, ಆನಂತರ ಸಾಕಷ್ಟು ಅವಕಾಶಗಳನ್ನು ಪಡೆದರು. ಕನ್ನಡದ ಜೊತೆಗೆ ತಮಿಳಿನಲ್ಲೂ ನಟಿಸಿದರು. ಕನ್ನಡದಲ್ಲಿ ಅಂಡರ್ವರ್ಲ್ಡ್, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೇ, ನಲ್ಲ, ಜೋಡಿ ಹಕ್ಕಿ, ತಾಯವ್ವ, ಚಕ್ರವರ್ತಿ, ಕಾಶಿ, ತಾಯವ್ವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.










Leave a Reply