ಕಾರಂಜೋಲ್ ಮತ್ತು ಕ್ಯಾಸಲ್ ರಾಕ್ ನಡುವೆ ಇಂದು ಮುಂಜಾನೆ ವಾಸ್ಕೋಡಗಾಮಾ(VascodaGama)-ಯಶವಂತಪುರ ರೈಲಿನ ( ಸಂಖ್ಯೆ 17310) ಬೋಗಿಯೊಂದು ಹಳಿತಪ್ಪಿದ ಪರಿಣಾಮ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಸುಮಾರು 2.30ರ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಕೆಲಕಾಲ ಈ ಮಾರ್ಗದಲ್ಲಿ ಇತರ ರೈಲು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಇಂದು ಬೆಳಗ್ಗೆ 6.30 ಕ್ಕೆ ಹೊರಡಬೇಕಿದ್ದ ರೈಲು ಸಂಖ್ಯೆ 18048 (ವಾಸ್ಕೋ ಡ ಗಾಮಾ – ಶಾಲಿಮಾರ್ ) ಬೆಳಿಗ್ಗೆ 8.30 ಕ್ಕೆ ಹೊರಡಲು ಮರುನಿಗದಿಗೊಳಿಸಲಾಯಿತು. ಇದರಿಂದಾಗಿ ಎರಡು ಗಂಟೆ ವಿಳಂಬವಾಯಿತು.
ಈ ಮಧ್ಯೆ ಹೆಚ್ಚಿನ ದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮೇ 23 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ ಡ ಗಾಮಾವನ್ನು ಲೋಂಡಾ ನಿಲ್ದಾಣದಲ್ಲಿಯೇ ನಿಲ್ಲಿಸಲಾಯಿತು.
ರೈಲಿನ ಬೋಗಿ ಹಳ್ಳಿ ತಪ್ಪಿದ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ 1,000 ಪ್ರಯಾಣಿಕರಿಗೆ ಲೋಂಡಾ ನಿಲ್ದಾಣದಲ್ಲಿ ಉಪಹಾರ, ಚಹಾ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ನೈಋತ್ಯ ರೈಲ್ವೆ (SWR) ಮಾಡಿತ್ತು. ಘಟನೆ ನಡೆದ ಆರು ಗಂಟೆ ನಂತರ ಬೆಳಗ್ಗೆ 8.40ರ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ರೈಲು ಸೇವೆಗಳು ಪುನಃ ಪ್ರಾರಂಭವಾಗಿವೆ.
ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಅಶ್ಲೀಲ ವರ್ತನೆ, ರಾಜಕಾರಣಿಯ Video! ವೈರಲ್
Leave a Reply