ಮಹಾ ಮಾನವತಾವಾದಿ ಸಂತ ಶ್ರೀ ಸೇವಾಲಾಲ ಮಹಾರಾಜರು..!

*ಮಹಾ ಮಾನವತಾವಾದಿ ಸಂತ ಶ್ರೀ ಸೇವಾಲಾಲ ಮಹಾರಾಜರು*

ಬುದ್ಧ, ಬಸವ, ಕಬೀರ ಗುರುನಾನಕ ರಂತಹ ಮಹಾನ್ ದಾರ್ಶನಿಕರ ಸಾಲಿನಲ್ಲಿ ಸೇರಿದವರು ಸಂತ ಶ್ರೀ ಸೇವಾಲಾಲರು. ತಮ್ಮದೇ ಆದ ಅನೇಕ ಚಮತ್ಕಾರಗಳನ್ನು ನಡೆಸಿ ಸರ್ವೇಜನಾ ಸುಖಿನೋ ಭವಂತು ಎಂಬ ಉಕ್ತಿಯಂತೆ ಜಾತಿ ಮತ ಭೇದವಿಲ್ಲದೆ ಎಲೆ ಮರೆಯ ಕಾಯಿಯಂತೆ ಸರ್ವ ಜನಾಂಗಕ್ಕೂ ಒಳಿತು ಮಾಡಿದ  18ನೇ ಶತಮಾನದ ಸಾಮಾಜಿಕ ಹರಿಕಾರ ಮಹಾನ್ ದಾರ್ಶನೀಕ ಸಂತ ಶ್ರೀ ಸೇವಾಲಾಲರು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಾದಿಗಳನ್ನು ತ್ಯಜಿಸಿ ಇಡೀ ಜೀವನವನ್ನೇ  ಸಮಾಜದ ಸೇವೆಗಾಗಿ ಮುಡುಪಿಟ್ಟು, “ಸೇವಾಲಾಲ್” “ಸೇವಾಭಾಯಾ” ಎಂಬ ನಾಮಗಳಿಂದ ಕರೆಸಿಕೊಂಡವರು, “ಸೇವಾ” ಎಂದರೆ ಸೇವೆ ಮಾಡುವವನು “ಭಾಯಾ” ಎಂದರೆ ಸಹೋದರ ಅಥವಾ ಅಣ್ಣ ಎಂದು ಅರ್ಥ ಅಂದರೆ ಸೇವಾಲಾಲರು ಈ ಜಗತ್ತಿನಲ್ಲಿ ಹುಟ್ಟಿರುವ ಎಲ್ಲ ಸ್ತ್ರೀಯರು ನನ್ನ ಸಹೋದರಿಯರು ಎಂದೇ ತಿಳಿದಿದ್ದನು. ಸಿರ್ಸಿಯ ಮಾರಿಕಾಂಬೆಯ ತಪಸ್ಸನ್ನು ಗೈದ ಭೀಮನಾಯ್ಕ ಮತ್ತು ಧರ್ಮಣಿ ಬಾಯಿ ದಂಪತಿಗಳ ವರವಾಗಿ ಪಡೆದ ಪುತ್ರನು ಹೀಗಾಗಿ ದೇವಿಯು ಮುಂದೆ ಈ ನಿನ್ನ ಸುಪುತ್ರನು ನನ್ನ ಭಕ್ತನಾಗಬೇಕೆಂದು ಭೀಮಾ ನಾಯ್ಕ್  ನಲ್ಲಿ ಮಾತು ಪಡೆದುಕೊಂಡಿದ್ದಳು ಅಂತೆಯೇ  ಇವನು ದೇವಿಯ ಭಕ್ತನಾಗಿ ಅವಳ ಕೃಪೆಯಂತೆ ತನ್ನ ಸಖ್ಯಾ- ಪಟ್ಯಾ ಎಂಬ ಸ್ನೇಹಿತರೊಂದಿಗೆ ದನ ಕಾಯುತ್ತ  ಅನೇಕ ಪವಾಡಗಳನ್ನು ಮಾಡಿದನು  ತನ್ನ ಗೆಳೆಯರಿಗೆ ಹಸುವಾದಾಗ ತನ್ನ ಮಂತ್ರ ಶಕ್ತಿಯಿಂದ ಅತೀ ಆಶ್ಚರ್ಯ ಕರ ರೀತಿಯಲ್ಲಿ ಉಸುಕಿನ ಸಿರಾ ಮಾಡಿ, ಗಿಡಗಳ ಎಲೆಗಳಿಂದ ಪೂರಿ, ಹೂವಿನಿಂದ ಬಾಜಿ ತಯಾರಿಸಿ  ಉಣಿಸಿದನು. ಹಸಿವನ್ನು ನೀಗಿಸಿದನು. ದನ ಕಾಯುತ್ತ ಬೇಸರವಾದಾಗ ಬಂಡೆ ಗಲ್ಲುಗಳನ್ನೇ ನಗಾರಿಯಾಗಿ ತಾಳೆ ಗಿಡದ ಎಲೆಗಳಿಂದ ತಾಳೆಗಳನ್ನು ಮಾಡಿ (ವಾಜಾ) ಭಜನಾ ಸಂಸ್ಕೃತಿಯನ್ನು ಹುಟ್ಟು ಹಾಕಿದನು ಇಂಥ ಇವನ ಪವಾಡ ಗಳು ಊರೆಲ್ಲ ತುಂಬಿ ಹರಡಿತು, ಜನರಿಗೆ ಆಶ್ಚರ್ಯ ವಾಗತೋಡಗಿತು. ಮುಂದೆ ತನ್ನ ಮಾಂತ್ರಿಕ ಶಕ್ತಿಯನ್ನು ಸಮಾಜ ಸೇವೆಗೆ ಏಕೆ ಬಳಸಿಕೊಳ್ಳಬಾರದೆಂದು ಯೋಚಿಸಿ  ಜನರ ಸಂಕಷ್ಟಗಳನ್ನು ನಿವಾರಿಸಲು ಅವರ ಸೇವೆಯನ್ನು ಮಾಡಲು ಮತ್ತಷ್ಟು  ಕೃಪೆ ತೋರಬೇಕೆಂದು ದೇವಿಯಲ್ಲಿ ಭಿನ್ನವಿಸಿಕೊಂಡನು. ದೇವಿಯು ಇವನ ಕೋರಿಕೆಗೆ ತಥಾಸ್ತು ಎಂದಳು ನರಸಿಂಗ ದಾದಾ ಎಂಬ ವ್ಯಕ್ತಿಯು ಸೇವಾಲಾಲನನ್ನು ಪರೀಕ್ಷೆ ಮಾಡಿಯೇ ಬಿಡಬೇಕೆಂದು ಚಿಂಗರ್ಯಾ  ಎಂಬ ತನ್ನ ಮೊಮ್ಮಗನನ್ನು ಹೆಣ್ಣು ಹುಡುಗಿಯ ವೇಷ ಧರಿಸಿ ಇವಳು ನನ್ನ ಮಗಳು ಮದುವೆಯಾಗಿ 10ವರ್ಷಗಳಾದರೂ ಮಕ್ಕಳಾಗಿಲ್ಲ ಕೃಪೆ ತೋರಬೇಕೆಂದು ಸೇವಾಲಾಲ್ ಹತ್ತಿರ ಭಿನ್ನವಿಸಿಕೊಳ್ಳುತ್ತಾನೆ ಈತನ ಮನದ ಮರ್ಮ ಅರಿತ ಸೇವಾಲಾಲನು  ಇವಳಿಗೆ ಒಂದು ವರ್ಷದಲ್ಲಿ ಮಕ್ಕಳಾಗುತ್ತವೆ ತಥಾಸ್ತು ಎಂದು ಆಶೀರ್ವಧಿಸುತ್ತಾನೆ. ಇದನ್ನು ಕಂಡ ನರ್ಸಿಂಗ್ ದಾದಾ ಅಪಹಾಸ್ಯ ದಿಂದ ನಕ್ಕು ಇವನು ಹುಡುಗ ಇವನು ಹೇಗೆ ಬಸುರಿ ಯಾಗುತ್ತಾನೆ? ಸೇವಾಲಾಲ್ ನಿಗೆ ಅಷ್ಟೂ ತಿಳಿಯಲಿಲ್ಲ ಅವನೊಬ್ಬ ಡೋoಗಿ  ಸಾದು ಎಂದು ಹೇಳಿ ನಗುತ್ತಾ ಮುಂದೆ ಸಾಗಿದರು ಆದರೆ ಚಿಂಗರ್ಯಾನಿಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಹೋದರೆ ಆತನ ಅಂಗಾoಗಗಳೆಲ್ಲ ಬದಲಾಗಿ ಹೆಣ್ಣಿನ ರೂಪ ತಾಳಿದ್ದನ್ನು ನೋಡಿ ಘಾಬರಿಯಾಗಿ ನರಸಿಂಗ್ ದಾದಾ ನಿಗೆ ತಿಳಿಸಿದಾಗ ಆತನಿಗೆ ಅರಿವಾಯಿತು ಸೇವಾಲಾಲ್ ನೊಂದಿಗೆ ಹೀಗೆ ವರ್ತಿಸಬಾರದಿತ್ತು ಎಂದು ತಿಳಿದು ಮತ್ತೆ ಓಡಿ ಹೋಗಿ ತಮ್ಮಿಂದ ಪ್ರಮಾದವಾಗಿದೆ ಕ್ಷಮಿಸೆಂದು ಸೇವಾಲಾಲನ ಪಾದಕ್ಕೆ ಬಿದ್ದು ಕ್ಷಮೆ ಕೋರಿ ನನ್ನ ಮೊಮ್ಮಗನನ್ನು ಮತ್ತೆ ಮೊದಲಿನಂತೆ  ಗಂಡಾಗಿ ಮಾಡಿ  ಎಂದು ಕೇಳಿಕೊಂಡರು ಆದರೆ ಸೇವಾಲಾಲನು ಒಂದು ಸಲ ನುಡಿದ ನಾಲಿಗೆಗೆ ಆ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ ವೆಂದು ಹೇಳಿದನು  ಒಂದು ಸಲ ಬ್ರಿಟಿಷರ ಹಡಗೊಂದು  ಸುಳಿವಿಗೆ ಸಿಕ್ಕಿ ಹಾಕಿಕೊಂಡಿತು ಆಗ ಈತನನ್ನು ನಮ್ಮ ಹಡಗು ಮುಳಗದಂತೆ ರಕ್ಷಿಸಬೇಕೆಂದು ಕೇಳಿಕೊಂಡಾಗ ಸೇವಾಲಾಲ್ ನು ಅದನ್ನು ಅಪಾಯದಿಂದ ರಕ್ಷಿಸಿದಾಗ ಬ್ರಿಟಿಷರು ಕಾಣಿಕೆಯಾಗಿ ಮುತ್ತಿನ ಹಾರವನ್ನು ನೀಡಿದರು ಆಗ ಸೇವಾಲಾಲರನ್ನು ಮೋತಿವಾಳೋ ಎಂದು ಜನ ಕರೆಯ ತೊಡಗಿದರು  ನಂತರ ಹೈದರಾಬಾದ ನಿಜಾಮನ ಹೊಲಗಳಲ್ಲಿ ಇವರ ದನಗಳು ಮೇಯುವಾಗ ಅವನ ಸೈನಿಕರು ಅವುಗಳನ್ನು ಕಟ್ಟಿಹಾಕಿದರು  ಸೇವಾಲಾಲನ ಭಂಟರಾದ ಝoಗೀ- ಭಂಗಿ ಮತ್ತು ನಿಜಾಮನ ಸೈನಿಕರ ನಡುವೆ ಕದನವಾಗಿ ಸೈನಿಕರು ಸೋತು ಹೈರಾಣಾಗಿ ನಿಜಾಮನ ಮುಂದೆ ನಡೆದ ಘಟನೆ ಹೇಳಿದಾಗ ಸೇವಾಲಾಲನ ಮಹಿಮೆಯರಿತ ನಿಜಾಮ ಸೇವಾಲಾಲನನ್ನು ಮೆರವಣಿಗೆಯ ಮೂಲಕ ಆಸ್ಥಾನಕ್ಕೆ ಕರೆತಂದು ಮಾನ-ಸನ್ಮಾನ ನೀಡಿ ಸೇವಾಲಾಲನ ಭಾವಚಿತ್ರ ಬಿಡಿಸಲು ನಿಜಾಮ್ ಅವರ ಆಸ್ಥಾನದ ಕಲಾಕಾರರಿಗೆ ಆಜ್ಞೆ ನೀಡಿದನು ಅದುವೆ ಸೇವಾಲಾಲರ ಈಗಿರುವ ಭಾವಚಿತ್ರ,  ಮುಂದೆ ಅವನ ಅನೇಕ ಪವಾಡಗಳಿಂದ ಜನರಿಗೆ ಒಳ್ಳೆಯದಾಗತೊಡಗಿತು.
ಜನರು ದೇವಿಯನ್ನು ಆರಾಧಿಸುವುದನ್ನು ಬಿಟ್ಟು ಸೇವಾಲಾಲರನ್ನೇ ಹಿಂಬಾಲೀಸತೊಡಗಿದರು. ಇದರಿಂದ ದೇವಿಯು ಕುಪಿತಾಳಾದಳು. ಅನೇಕ ರೀತಿಯಲ್ಲಿ ಸೇವಾಲಾಲರನ್ನು ಕಾಡತೊಡಗಿದಳು. ನಾನು ಸುಮ್ಮನಿದ್ದರೆ ಮತ್ತೆ ಸೇವಾಲಾಲನಿಗೆ ಜನ ಭಕ್ತರಾಗುತ್ತಾರೆ ಆದ್ದರಿಂದ ಇವನನ್ನು ಮದುವೆ ಮಾಡಿಸಿ ಬಿಟ್ಟರೆ ಇವನ ದೈವಿಕ ಶಕ್ತಿ ಕಡಿಮೆಯಾಗಿಬಿಡುತ್ತದೆ ಎಂದು ತಿಳಿದು ಸೇವಾಲಾಲನಿಗೆ ಪ್ರತ್ಯಕ್ಷವಾಗಿ ನೀನು ಮದುವೆ ಮಾಡಿಕೊಂಡು ಸಂಸಾರಿಯಾಗು ಎಂದು ದುಂಬಾಲು ಬೀಳುತ್ತಾಳೆ ಆದರೆ ಅದ್ಕಕೊಪ್ಪದ ಸೇವಾಲಾಲ್ ನಾನು ಅಖಂಡ ಬ್ರಹ್ಮಚಾರಿಯಾಗಿರುತ್ತೇನೆ ಮಾತೆ, ಈ ಜಗತ್ತಿನ ಎಲ್ಲ ಮಹಿಳೆಯರು ನನ್ನ ತಂಗಿಯ ಸಮಾನ ಅಂದಾಗ ನಾನು ಹೇಗೆ ಮದುವೆಯಾಗುವುದು? ಆದ್ದರಿಂದ ಮದುವೆಯಾಗಲಾರೆ ಎಂದು ಖಡಾ ಖಂಡಿತವಾಗಿ ಹೇಳಿಬಿಡುತ್ತಾನೆ.

ಇದರಿಂದ ಸಿಟ್ಟಾದ ದೇವಿಯು ಮಾಯವಾಗಿ ಅನೇಕ ತರವಾಗಿ ಕಾಟ ಕೊಡುತ್ತಾಳೆ ಅವನ ತಮ್ಮನನ್ನು ಸಾಯಿಸುತ್ತಾಳೆ ಅನೇಕ ದನ ಕರುಗಳು ಸಾಯುತ್ತವೆ ಮುಂದೆ ನ್ಯಾಯ ಕೇಳಲು ಸ್ವರ್ಗಕ್ಕೆ ಹೋಗೋಣ ಎಂದು ಸೇವಾಲಾಲನನ್ನು ದೇವಿಯು ಕೇಳಿಕೊಂಡಾಗ ಆಗಲಿ ಎಂದ ಸೇವಾಲಾಲ್ ತನ್ನ ಸಹೋದರರಾದ ಹಾಂಪಾ ಬದ್ದು ನನ್ನು ಕರೆದು ನಾನು ಸ್ವರ್ಗಕ್ಕೆ ಹೋಗಿ ಬರುತ್ತೇನೆ ನಾನು ತಿರುಗಿ ಬರುವವರೆಗೂ ನನ್ನ ದೇಹವನ್ನು ಯಾವ ಹೆಣ್ಣು ಮಕ್ಕಳೂ ತಾಗದಂತೆ ನೋಡಿಕೊಳ್ಳಿ ಎಂದು ಹೇಳಿ ದೇವಿಯೊಡನೆ ಹೋಗುತ್ತಾನೆ, ಇಲ್ಲಿ ಅವನ ಸಹೋದರರು ಅವನ ದೇಹವನ್ನು ಬೇವಿನ ಎಲೆಗಳಿಂದ ಮುಚ್ಚಿ ಭಜನೆಯನ್ನು ಮಾಡುತ್ತಿರುತ್ತಾರೆ ಸ್ವರ್ಗದಲ್ಲಿ ಬ್ರಹ್ಮನ ಮುಂದೆ ನ್ಯಾಯ ಕೇಳಲು ಬ್ರಹ್ಮನು ಸೇವಾಲಾಲನ ಹಣೆಬರಹದಲ್ಲಿ ಮದುವೆಯು ಬರೆದಿಲ್ಲ ಎಂದಾಗ  ಇಲ್ಲಿಯೂ ಸೇವಾಲಾಲನೆ ಗೆದ್ದನಲ್ಲ ಎಂದು ತಂತ್ರ ರಚಿಸಿದ ದೇವಿಯು ನಾನು ನನ್ನ ಗೆಳತಿಯರನ್ನು ಭೇಟಿಯಾಗಿ ಬರುವೆ ಅಲ್ಲಿಯವರೆಗೂ ನೀನು ಇಲ್ಲಿಯೇ ಇರು ಎಂದು ನೇರವಾಗಿ ಭೂಮಿಗಿಳಿದು ಮುದುಕಿಯ ವೇಷ ಧರಿಸಿ ಧರ್ಮಣಿ ಬಾಯಿಯನ್ನು ಭೇಟಿಯಾಗಿ ನಿನ್ನ ಮಗ ಸೇವಾಲಾಲ್ ಸತ್ತು ಹೋಗಿದ್ದಾನೆoದಾಗ  ಅಳುತ್ತ ಸೇವಾಲಾಲನ ದೇಹ ಸ್ಪರ್ಶ ಮಾಡಿದಾಗ ಅವನ ದೇಹವು ಮೂರು ಸಲ ಮೇಲಿನಿಂದ ಕೆಳಗೆ ಇಳಿದು ಸೇವಾಲಾಲ ಐಕ್ಯನಾದನು ಅವನಮುಂದೆ ಉರಿಯುತ್ತಿದ್ದ ದೀಪವನ್ನು ದೇವಿಯು ಚಿಟ್ಟೆಯ ರೂಪದಲ್ಲಿ ಬಂದು ಆರಿಸಿದಳು ನಂತರ ಅವನ
ಕಳೆಬರಹವನ್ನು ಮಹಾರಾಷ್ಟ್ರದ ಪೌರಾಗಾಢ ದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಹೀಗೆ ಮಾನವ ಜನಾಂಗದ ಅತ್ಯಮೂಲ್ಯ ರತ್ನವೊಂದು ಅವಸಾನವಾಯಿತು. ಈ ಜಗತ್ತಿಗೆ ಸತ್ಯ ಅಹಿಂಸೆಯ  ಅನೇಕ ತತ್ವಗಳನ್ನು ಸಾರಿದನು ಬದುಕಿನ ಮಹತ್ವವನ್ನು ತಿಳಿಸಿದನು ಅನೇಕ ಭೂತ ಭವಿಷ್ಯತ್ತಿನ ವಿಚಾರಗಳನ್ನು ಆಗಲೇ ಸಾರಿದ್ದನು.

  • ಲೇಖಕರು.
    ನಾರಾಯಣ ಆರ್ ರಾಠೋಡ.
    ಉಪನ್ಯಾಸಕರು, ಬಂಜಾರಾ ಭಾಷಾ ಲೇಖಕರು, ಹಾಗೂ ಸದಸ್ಯರು ಕರ್ನಾಟಕ ರಾಜ್ಯ ಬಂಜಾರಾ ಸಾಹಿತ್ಯ ಪರಿಷತ್ತು.( ರಿ ) ಹುಬ್ಬಳ್ಳಿ

Leave a Reply

Your email address will not be published. Required fields are marked *