Sai Sudarshan: ಒಂದಲ್ಲ, ಎರಡಲ್ಲ 4 ಪ್ರಶಸ್ತಿ ಬಾಚಿಕೊಂಡ 23ರ ಯುವಕ!

ಐಪಿಎಲ್ ಮುಕ್ತಾಯದ ಬಳಿಕ ಐಪಿಎಲ್ ಆಡಳಿತ ಮಂಡಳಿ ಲೀಗ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಪ್ರಶಸ್ತಿಗಳನ್ನ ನೀಡಲಾಯಿತು. ಅಚ್ಚರಿಯೆಂದರೆ ಎಲಿಮಿನೇಟರ್​​ನಲ್ಲಿ ಸೋಲು ಕಂಡ ಗುಜರಾತ್ ಟೈಟನ್ಸ್​ ತಂಡದ ಆಟಗಾರರು ಬಹುತೇಕ ವೈಯಕ್ತಿಕ ಪ್ರಶಸ್ತಿಗಳನ್ನ ಬಾಚಿಕೊಂಡರು.

74 ದಿನಗಳ ಐಪಿಎಲ್ ಹಬ್ಬ ಮುಕ್ತಾಯಗೊಂಡಿದೆ ಮಾರ್ಚ್ 22 ರಂದು ಪ್ರಾರಂಭವಾದ ಲೀಗ್‌ನ ಫೈನಲ್ ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಟ್ರೋಫಿ ಗೆಲ್ಲುವುದರೊಂದಿಗೆ ಅಂತ್ಯವಾಗಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂಜಾಬ್ ಕಿಂಗ್ಸ್ (PBKS) ಅನ್ನು 6 ರನ್‌ಗಳಿಂದ ಮಣಿಸಿ ತಮ್ಮ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಐಪಿಎಲ್ ಮುಕ್ತಾಯದ ಬಳಿಕ ಐಪಿಎಲ್ ಆಡಳಿತ ಮಂಡಳಿ ಲೀಗ್​​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಪ್ರಶಸ್ತಿಗಳನ್ನ ನೀಡಲಾಯಿತು. ಅಚ್ಚರಿಯೆಂದರೆ ಎಲಿಮಿನೇಟರ್​​ನಲ್ಲಿ ಸೋಲು ಕಂಡ ಗುಜರಾತ್ ಟೈಟನ್ಸ್​ ತಂಡದ ಆಟಗಾರರು ಬಹುತೇಕ ವೈಯಕ್ತಿಕ ಪ್ರಶಸ್ತಿಗಳನ್ನ ಬಾಚಿಕೊಂಡರು.
ಐಪಿಎಲ್ ಸೆನ್ಷೇಸನ್ ಆಗಿರುವ ಗುಜರಾತ್ ಟೈಟನ್ಸ್ ತಂಡದ ಓಪನರ್ ಸಾಯಿ ಸುದರ್ಶನ್ ಬರೋಬ್ಬರಿ 4 ಪ್ರಶಸ್ತಿಗಳನ್ನ ಬಾಚಿಕೊಂಡರು. ಒಟ್ಟಾರೆ ಅವರು 40 ಲಕ್ಷ ರೂಪಾಯಿ ಬಹುಮಾನವನ್ನ ಪಡೆದುಕೊಂಡರು.
ಆರೆಂಜ್ ಕ್ಯಾಪ್: ಸಾಯಿ ಸುದರ್ಶನ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸಾಯಿ ಸುದರ್ಶನ್ ಪಾತ್ರರಾಗಿದ್ದಾರೆ. 23 ವರ್ಷದ ಸಾಯಿ ಸುದರ್ಶನ್ ಪ್ರಸ್ತುತ ಐಪಿಎಲ್ ಋತುವಿನಲ್ಲಿ 759 ರನ್ ಗಳಿಸಿದ್ದಾರೆ. ಈ ಸೀಸನ್​​ನಲ್ಲಿ ಅವರನ್ನು ಹೊರತುಪಡಿಸಿ, 700 ರನ್‌ಗಳ ಗಡಿ ದಾಟಿದ ಮತ್ತೊಬ್ಬ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮಾತ್ರ.
ಹೆಚ್ಚು ಬೌಂಡರಿ: ಸಾಯಿ ಸುದರ್ಶನ್ ಐಪಿಎಲ್ 2025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಲ್ಲದೆ, ಅತಿ ಹೆಚ್ಚು ಬೌಂಡರಿಗಳನ್ನು ಸಹ ಬಾರಿಸಿದ ಬ್ಯಾಟರ್​ಗಳಾಗಿದ್ದಾರೆ. ಈ ಋತುವಿನಲ್ಲಿ ಅವರು 88 ಬೌಂಡರಿಗಳು ಮತ್ತು 21 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ (69) ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (65) ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಫ್ಯಾಂಟಸಿ ಕಿಂಗ್ ಆಫ್ ದಿ ಸೀಸನ್: ಸಾಯಿ ಸುದರ್ಶನ್ ಈ ಸೀಸನ್​​ನಲ್ಲಿ ಒಟ್ಟು 1495 ಫ್ಯಾಂಟಸಿ (ಡ್ರೀಮ್ ಇಲೆವೆನ್ ಪಾಯಿಂಟ್) ಅಂಕಗಳೊಂದಿಗೆ ಋತುವಿನಲ್ಲಿ ಅಗ್ರಸ್ಥಾನ ಪಡೆದರು.
ಋತುವಿನ ಉದಯೋನ್ಮುಖ ಆಟಗಾರ: 23 ವರ್ಷದ ಸಾಯಿ ಸುದರ್ಶನ್ ಈ ಋತುವಿನ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದಾರೆ. 759 ರನ್ ಗಳಿಸಿದ ಅವರು ಈ ಸೀಸನ್​​ನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡರು.
ಈ 4 ಪ್ರಶಸ್ತಿಗಳನ್ನು ತಮ್ಮ ದಾಗಿಸಿಕೊಂಡ ಸಾಯಿ ಸುದರ್ಶನ್​ ತಲಾ 10 ಲಕ್ಷದಂತೆ ಬಹುಮಾನವಾಗಿ ಒಟ್ಟು 40 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡರು. ಇಷ್ಟೇ ಅಲ್ಲ ಗುಜರಾತ್ ಟೈಟನ್ಸ್ ತಂಡದ ಪ್ರಸಿಧ್ ಕೃಷ್ಣ 25 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಚ್ ಪಡೆದರೆ, ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಡಾಟ್ ಬಾಲ್ ಆಡಿದ ಬೌಲರ್​ ಪ್ರಶಸ್ತಿ ಪಡೆದರು. ಒಟ್ಟಾರೆ 9 ವೈಯಕ್ತಿಕ ಪ್ರಶಸ್ತಿಗಳಲ್ಲಿ 6 ಪ್ರಶಸ್ತಿಗಳನ್ನ ಗುಜರಾತ್ ಟೈಟನ್ಸ್​ ಪಡೆದುಕೊಂಡಿದೆ. ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಸೂರ್ಯಕುಮಾರ್​ ಯಾದವ್​ಗೆ ಸಿಕ್ಕರೆ, ಕ್ಯಾಚ್ ಆಫ್​ ದ ಸೀಸನ್​ ಸನ್​ರೈಸರ್ಸ್ ಹೈದರಾಬಾದ್ ತಂಡದ ಕಮಿಂಡು ಮೆಂಡಿಸ್​ಗೆ, ಸೂಪರ್ ಸ್ಟ್ರೈಕರ್ ಅವಾರ್ಡ್ ವೈಭವ್ ಸೂರ್ಯವಂಶಿಗೆ ದೊರೆಯಿತು.

Leave a Reply

Your email address will not be published. Required fields are marked *