RCB ಗೆಲುವಿನ ಸಂಭ್ರಮದಲ್ಲಿದ್ದ ಕುಸಿದು ಬಿದ್ದು ಕೊಹ್ಲಿ ಅಭಿಮಾನಿ ಸಾವು!

ಫೈನಲ್​ ಪಂದ್ಯದಲ್ಲಿ (Final Match) ರಾಯಲ್​ ಚಾಲೆಂಜರ್ಸ್​​ ಬೆಂಗಳೂರು (Royal Challengers Bangalore) ತಂಡ ಗೆದ್ದು ಬೀಗಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. 18 ವರ್ಷಗಳ ತಪ್ಪಸ್ಸಿಗೆ ಕೊನೆಗೂ ಫಲ ಸಿಕ್ಕಿದೆ. ಆರ್​​ಸಿಬಿ ಪಂಜಾಬ್​ ಕಿಂಗ್ಸ್​​ ವಿರುದ್ಧ ರೋಚಕ ಗೆಲುವು (Winning) ಸಾಧಿಸಿದೆ. ಈ ಸಲ ಕಪ್​ ನಮ್ದೇ ಎಂದು ಕಪ್​ ಎತ್ತಿ ಹಿಡಿದು ಕೋಹ್ಲಿ ಪಡೆ ಮುತ್ತಿಕ್ಕಿದೆ.  ಇತ್ತ ಅಭಿಮಾನಿಗಳ ಹರ್ಷೋದ್ಘಾರ ಕೂಡ ಮುಗಿಲು ಮುಟ್ಟಿತ್ತು. ಈ ವೇಳೆ ಇದೊಂದು ದಾರುಣ ಘಟನೆ ಸಂಭವಿಸಿದೆ. 
ಇಷ್ಟು ವರ್ಷ ಈ ಸಲ ಕಪ್​ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್​​ಸಿಬಿ ಬಾಯ್ಸ್​​ ಕಪ್​​ ಗೆದ್ದು ಸಂಭ್ರಮ ಹೆಚ್ಚಿಸಿದ್ದಾರೆ.  ಆರ್​​ಸಿಬಿ ಫ್ಯಾನ್ಸ್​​ ಕೇವಲ ಬೆಂಗಳೂರಲ್ಲಷ್ಟೇ ಅಲ್ಲ, ಇಡೀ ರಾಜ್ಯ ಮತ್ತು ದೇಶಾದ್ಯಂತ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ದಶಕಗಳ ಗೆಲುವಿನ ಕನಸು ನಿನ್ನೆ ನನಸಾಗಿದೆ.
ಕುಣಿದು ಕುಪ್ಪಳಿಸುವಾಗ ಕುಸಿದು ಬಿದ್ದು ಕೊಹ್ಲಿ ಅಭಿಮಾನಿ ಸಾವು!
ಇತ್ತ ಬೆಳಗಾವಿಯಲ್ಲೂ ಆರ್​​ಸಿಬಿ ಗೆದ್ದು ಬೀಗಿದ್ದಕ್ಕೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ ಆರ್​​ಸಿವಿ ಗೆಲುವನ್ನು ಸಂಭ್ರಮಿಸುತ್ತಿದ್ದರು. ಈ ವೇಳೆ ಒಮದು ದಾರುಣ ಘಟನೆ ಸಂಭವಿಸಿದೆ. ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಆರ್​ಸಿಬಿ ಗೆಲುವನ್ನು ಸಂಭ್ರಮಿಸುತ್ತಿದ್ದ ಆರ್​​ಸಿಬಿ ಅಭಿಮಾನಿ ಕುಸಿದು ಬಿದ್ದವನು ಮತ್ತೇ ಮೇಲೆ ಎದ್ದೇ ಇಲ್ಲ. ಸ್ಥಳದಲ್ಲೇ ಸಾವನಪ್ಪಿದ್ದಾನೆ.

Leave a Reply

Your email address will not be published. Required fields are marked *