ಗಂಡ ಹೆಂಡತಿಯ ವಯಸ್ಸಿನ ಅಂತರದ ಬಗ್ಗೆ ಚಾಣಕ್ಯ ಏನು…..

ಗಂಡ ಹೆಂಡತಿಯ(Husband wife) ವಯಸ್ಸಿನ ಅಂತರದ ಬಗ್ಗೆ ಚಾಣಕ್ಯ ಏನು ಹೇಳುತ್ತಾರೆ?

ಚಾಣಕ್ಯರ ಪ್ರಕಾರ ಗಂಡ ಮತ್ತು ಹೆಂಡತಿಯ ನಡುವೆ ಎಂದಿಗೂ ಹೆಚ್ಚು ವಯಸ್ಸಿನ ಅಂತರ ಇರಬಾರದು. ಇದು ಅವರ ನಡುವೆ ಸೈದ್ಧಾಂತಿಕ ವ್ಯತ್ಯಾಸಗಳಿಗೆ ಕಾರಣವಾಗಬಹುದು, ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ವ್ಯತ್ಯಾಸ ಕಡಿಮೆಯಾದಷ್ಟೂ ಅವರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು, ದಾಂಪತ್ಯ ಜೀವನವೂ ಚೆನ್ನಾಗಿರುತ್ತದೆ.

 

ಗಂಡ ಹೆಂಡತಿಯ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

 

ಗಂಡ ಹೆಂಡತಿಯ ನಡುವೆ ವಯಸ್ಸಿನ ಅಂತರ ಹೆಚ್ಚಿರಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಉದಾಹರಣೆಗೆ 20-25 ವರ್ಷ ವಯಸ್ಸಿನ ಹುಡುಗಿ ತನ್ನ ತಂದೆಯ ವಯಸ್ಸಿನ ಹುಡುಗನನ್ನು ಮದುವೆಯಾಗಬಾರದು. ಇಂತಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲವಂತೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ದೃಷ್ಟಿಯಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಬಹಳ ಮುಖ್ಯ. ಇಬ್ಬರ ನಡುವೆ ದೊಡ್ಡ ಮಟ್ಟದ ವಯಸ್ಸಿನ ವ್ಯತ್ಯಾಸವಿದ್ದರೆ, ಜೀವನದಲ್ಲಿ ಒಂದಷ್ಟು ಸಮಸ್ಯೆಗಳು ತಲೆದೋರುತ್ತವೆ.

 

ಗಂಡ ಹೆಂಡತಿ ನಡುವೆ 3-5 ವರ್ಷಗಳ ಅಂತರವಿದ್ದರೆ ಸಾಕು:

 

ಗಂಡ ಹೆಂಡತಿಯ ನಡುವಿನ ಸಂಬಂಧವು ಅತ್ಯಂತ ಪವಿತ್ರವಾದದ್ದು. ಈ ಬಂಧವನ್ನು ಕಾಪಾಡಿಕೊಳ್ಳಲು, ಇಬ್ಬರ ನಡುವೆ ಹೊಂದಾಣಿಕೆ ಅಗತ್ಯ. ಆದರೆ ಹೆಚ್ಚಿನ ವಯಸ್ಸಿನ ಅಂತರವಿದ್ದರೆ ಯೋಚಿಸುವ ಬಗೆ, ಮಾತನಾಡುವ ಶೈಲಿ, ಚಿಂತನೆ ಪ್ರತಿಯೊಂದು ವಿಷಯದಲ್ಲೂ ದೊಡ್ಡ ಮಟ್ಟದ ವ್ಯತ್ಯಾಸ ಕಾಣಿಸುತ್ತದೆ ನಂತರ ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹಾಗಾಗಿ ದಾಂಪತ್ಯ ಜೀವನ ಚೆನ್ನಾಗಿರಬೇಕು, ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಇರಬೇಕು ಎಂದಾದರೆ 3 ರಿಂದ 5 ವರ್ಷ ವಯಸ್ಸಿನ ಅಂತರವಿದ್ದರೆ ಸಾಕು, ಒಂದೇ ವಯಸ್ಸಿನ ಜನರು ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ, ಇದರಿಂದಾಗಿ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

 

ವಯಸ್ಸಿನ ಅಂತರ ಹೆಚ್ಚಿದ್ದರೆ ಏನಾಗುತ್ತದೆ?

 

ಭಿನ್ನಾಬಿಪ್ರಾಯಗಳಿಗೆ ಕಾರಣವಾಗಬಹುದು: ಚಾಣಕ್ಯ ನೀತಿಯ ಪ್ರಕಾರ, ಪುರುಷರು ಮತ್ತು ಮಹಿಳೆಯರ ನಡುವೆ ದೊಡ್ಡ ವಯಸ್ಸಿನ ವ್ಯತ್ಯಾಸವು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. 20 ವರ್ಷದ ಹುಡುಗಿ 40 ವರ್ಷದ ಪುರುಷನನ್ನು ಮದುವೆಯಾದರೆ, ಇವರಿಬ್ಬರ ಮನಸ್ಥಿತಿಯಲ್ಲೂ ತುಂಬಾ ವ್ಯತ್ಯಾಸಗಳಿರುತ್ತದೆ. ಅವಳ ಆದ್ಯತೆಗಳು ಸಣ್ಣ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ, ಆದರೆ ಪತಿ ಅದನ್ನು ಕಡಿಮೆ ಅಂದಾಜು ಮಾಡಬಹುದು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಆರಂಭಿಸುತ್ತದೆ.

 

ಹೊಂದಾಣಿಕೆಯ ಕೊರತೆ: ಆಚಾರ್ಯ ಚಾಣಕ್ಯರ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಅಂತರವು ತುಂಬಾ ಹೆಚ್ಚಿದ್ದರೆ, ಅವರ ನಡುವೆ ಹೊಂದಾಣಿಕೆಯ ಕೊರತೆ ಇರುತ್ತದೆ. ಉದಾಹರಣೆಗೆ, 40 ವರ್ಷಕ್ಕಿಂತ ಮೇಲ್ಪಟ್ಟ ಗಂಡನು ತನ್ನ ಜೀವನವನ್ನು ಬಹಳ ಪ್ರಾಯೋಗಿಕ ರೀತಿಯಲ್ಲಿ ನೋಡುತ್ತಾನೆ. ಹೆಂಡತಿ 20 ರಿಂದ 25 ವರ್ಷದವಳಾಗಿದ್ದರೆ, ಅವಳು ಪ್ರಾಯೋಗಿಕವಾಗಿ ಯೋಚಿಸುವುದಕ್ಕಿಂತ ಭಾವನಾತ್ಮಕವಾಗಿ ಹೆಚ್ಚು ಯೋಚಿಸುತ್ತಾಳೆ, ಇದು ಅವರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ.

Leave a Reply

Your email address will not be published. Required fields are marked *