Comedy khiladi ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ

‘ಕಾಮಿಡಿ ಕಿಲಾಡಿಗಳು(Comedy khiladi)’ ಶೋ ಖ್ಯಾತಿಯ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.

ಕಿರುತೆರೆ ನಟಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಡೆನೂರು ಮನು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ನಟಿಸಿದ್ದರು. ಇದು ಬಿಡುಗಡೆಯ ಹಂತಕ್ಕೆ ಬಂದಿತ್ತು. ಆದರೆ, ಅದಕ್ಕೂ ಮುನ್ನ ಅವರ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ.

ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನು ಜೊತೆ ಪರಿಚಯವಾಗಿತ್ತು. ಈಗ ‘ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ’ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನುಗಾಗಿ ಹುಡುಕಾಟ ನಡೆಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ ಆರೋಪದ ಮೇಲೆ ಯುವತಿ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಹ ನಟಿ ಮಾತ್ರವಲ್ಲದೆ ಇತರ ಮಹಿಳೆಯರ ಜೊತೆಗೆ ಕೂಡ ನಟ ಮನು ಅನೈತಿಕ ಸಂಬಂಧ ಹೊಂದಿದ್ದ. ಈ ಸಂಬಂಧವನ್ನು ಪ್ರಶ್ನಿಸಿದಾಗ ‘ಬ್ರೇಕಪ್’ ಎಂದು ನಿರ್ಲಕ್ಷ್ಯ ತೋರಿಸಿದ್ದಾನೆ. ಯುವತಿಗೆ ತಾಳಿ ಕಟ್ಟಿದರೂ ಮದುವೆಯಾಗದೆ ವಂಚನೆ ಮಾಡಿದ ಆರೋಪವೂ ಇದೆ. ‘ದಪ್ಪಗೆ ಇದ್ದೀಯಾ ನೀನು ಚೆನ್ನಾಗಿಲ್ಲ’ ಎಂದು ಅವಹೇಳನ ಮಾಡಿದ್ದನ್ನು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಚಿತ್ರ‌ನಟ ಮನು ವಿರುದ್ಧ ಲವ್ ಸೆ*ಕ್ಸ್ ದೋಖಾ ಆರೋಪ ಕೇಳಿಬಂದಿದ್ದು, 3 ವರ್ಷಗಳಿಂದ ಸಹ ಕಲಾವಿದೆ ಮೇಲೆ‌ ಅತ್ಯಾ*ಚಾರ ಎಸಗಿದ್ದಾನಂತೆ. ರಿಯಾಲಿಟಿ ಶೋ ನಲ್ಲಿ ಹೀರೋ ತರ ಮಿಂಚಿ ವಿನ್ನರ್ ಆದ ಮನು ರಿಯಲ್‌ ಲೈಫ್ ನಲ್ಲಿ ಖಳನಾಯಕನಾದ. 2018ರಲ್ಲಿ ಇವರಿಬ್ಬರ ಮಧ್ಯೆ ಪರಿಚಯವಾಗಿದೆ. ನಾವಿಬ್ಬರೂ ಬಹಳ ಒಳ್ಳೆಯ ಪ್ರೆಂಡ್ಸ್ ಆಗಿದ್ದೆವು. 2022ರ ನವೆಂಬರ್‌ ನಲ್ಲಿ ಶಿಕಾರಿಪುರಕ್ಕೆ ಹಾಸ್ಯ ಕಾರ್ಯಕ್ರಮಕ್ಕೆ ಹೋಗಿದ್ದಾಗ ಹೊಟೇಲ್‌ ನಲ್ಲಿ ನಟ ಮನು ಬಲತ್ಕಾರ ಮಾಡಿದ್ದಾನೆ ಎಂದು ಸಹ ನಟಿ ಆರೋಪಿಸಿದ್ದಾರೆ. ಆ ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ಅತ್ಯಾ*ಚಾರ ಮಾಡಿದ ಆರೋಪ ಕೇಳಿಬಂದಿದೆ.

 

Leave a Reply

Your email address will not be published. Required fields are marked *