ಬಿಜೆಪಿ ನಾಯಕ ಮನೋಹರ್‌ಲಾಲ್ ಧಕಾಡ್ ಅವರ ಸೆಕ್ಸ್ ವಿಡಿಯೋ ವಿವಾದ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಮತ್ತೋರ್ವ ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಹಾಗೂ ಸಿವ್ನಿ ಮಾಲ್ವಾದ ನಾಯಕ ಕಮಲ್ ರಘುವಂಶಿ ಅವರ ಹಳೆಯ ಅಶ್ಲೀಲ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಏಪ್ರಿಲ್ 29 ರಂದು (ಮಂಗಳವಾರ) ನಡೆದ ವಿವಾಹ ಸಮಾರಂಭದಲ್ಲಿ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಆಕ್ಷೇಪಾರ್ಹ ವರ್ತನೆಯಲ್ಲಿ ತೊಡಗಿರುವುದನ್ನು ಈ ವಿಡಿಯೋದಲ್ಲಿ ದಾಖಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಸೇರಿದಂತೆ ದೊಡ್ಡ ಜನಸಮೂಹವೇ ಭಾಗವಹಿಸಿತ್ತು. ಅದೇ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ನಾಯಕಿಯರೂ ಕೂಡ ಇದ್ದರು. ಆದರೂ ಯಾರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ವೈರಲ್ ವೀಡಿಯೊದಲ್ಲಿ, ಕಮಲ್ ರಘುವಂಶಿ ಅವಳೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯನ್ನು ಚುಂಬಿಸಿ ಅಶ್ಲೀಲವಾಗಿ ವರ್ತಿಸಿದರು. ಈ ಘಟನೆಯನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡರು.
Leave a Reply