ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಅಶ್ಲೀಲ ವರ್ತನೆ, ರಾಜಕಾರಣಿಯ Video! ವೈರಲ್

ರಾಜಕಾರಣಿಯೊಬ್ಬರು ಎಕ್ಸ್ ಪ್ರೆಸ್ ವೇನಲ್ಲಿ ಸಾರ್ವಜನಿಕವಾಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಸಿಸಿಟಿವಿ(CCTV)ಯಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ(Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಈ ವಿಡಿಯೋದಲ್ಲಿರುವ ರಾಜಕಾರಣಿ ಹೆಸರು ಮನೋಹರಲಾಲ್ ಧಕಡ್. ಅವರ ಪತ್ನಿ ಬಿಜೆಪಿ ಬೆಂಬಲಿತ ರಾಜಕಾರಣಿಯಾಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಬಿಜೆಪಿ ಅವರಿಂದ ಅಂತರ ಕಾಯ್ದುಕೊಂಡಿದೆ.

ಮೇ 13 ರಂದು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನ ಹೈ-ಸೆಕ್ಯುರಿಟಿ ಕಾರಿಡಾರ್‌ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಸಿಸಿವಿಟಿ ಕ್ಯಾಮೆರಾಗಳು ಸಂಪೂರ್ಣ ಕೃತ್ಯವನ್ನು ಸೆರೆಹಿಡಿದಿವೆ. ಮನೋಹರಲಾಲ್ ಧಕಡ್ ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ ಮಹಿಳೆಯೊಂದಿಗೆ ಲೈಂಗಿಕವಾಗಿ ಅಶ್ಲೀಲವಾಗಿ ವರ್ತಿಸುತ್ತಿರುವುದು ವಿಡಿಯೋದಲ್ಲಿದೆ.

ವೀಡಿಯೊದಲ್ಲಿ ಕಂಡುಬರುವ ಬಿಳಿ ಕಾರು – ಧಕಡ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ವೈರಲ್ ಆದ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296, 285, ಮತ್ತು 3(5) ಅಡಿಯಲ್ಲಿ ಧಕಡ್ ಮತ್ತು ಸಹ-ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 

Leave a Reply

Your email address will not be published. Required fields are marked *