ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಚೇಧನ ಪಡೆದಿದ್ದು, ಧನರ್ಶೀ ಅವರಿಗೆ ಶಾಶ್ವತ ಜೀವನಾಂಶವಾಗಿ 4.5 ಕೋಟಿ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂಬ ವರದಿಗಳ ನಡುವೆ ಆರ್‌ಜೆ ಮಹ್ವಾಶ್ ಬುಧವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆರ್‌ಜೆ ಮಹ್ವಾಶ್ ಅವರು ಯುಜ್ವೇಂದ್ರ ಚಾಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ವೇಳೆ ಚಾಹಲ್ ಮತ್ತು ಮಹ್ವಾಶ್ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಇದೀಗ ಆರ್‌ಜೆ ಮಹ್ವಾಶ್ ತಮ್ಮ ಫೊಟೋಗಳನ್ನು ಹಂಚಿಕೊಂಡಿದ್ದು, ಅವರು ತಮ್ಮ ಪೋಸ್ಟ್‌ಗೆ ನೀಡಿರುವ ಶೀರ್ಷಿಕೆ ಇದೀಗ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ.
‘ಜೂಟ್, ಲಾಲಾಚ್, ಔರ್ ಫರೇಬ್ ಸೆ ಪರೇ ಹೈಂ.. ಖುದಾ ಕ ಶುಕ್ರ್ ಐನೆ ಆಜ್ ಬಿ ಖಾಡೆ ಹೈಂ.. (ಸುಳ್ಳು, ದುರಾಸೆ ಮತ್ತು ವಂಚನೆಯಿಂದ ದೂರವಿದ್ದೇವೆ… ದೇವರಿಗೆ ಧನ್ಯವಾದಗಳು, ನಾವು ಇಂದಿಗೂ ನಿಂತಿದ್ದೇವೆ, ಕನ್ನಡಿಯಲ್ಲಿ ನೋಡುತ್ತಿದ್ದೇವೆ)’ ಎಂದು ಬರೆದಿದ್ದಾರೆ. ಯುಜ್ವೇಂದ್ರ ಚಾಹಲ್ ಅವರು ತಕ್ಷಣವೇ ಆ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.
ಧನಶ್ರೀ ವರ್ಮಾ ಅವರಿಗೆ ಜೀವನಾಂಶ ನೀಡಲು ಚಾಹಲ್ ಒಪ್ಪಿಕೊಂಡಿದ್ದಾರೆ ಎಂಬ ವರದಿಗಳು ಬುಧವಾರ ಹೊರಬಿದ್ದಿದ್ದು, ಆರ್‌ಜೆ ಮಹ್ವಾಶ್ ಅವರ ಪೋಸ್ಟ್ ಮಹತ್ವ ಪಡೆದುಕೊಂಡಿದೆ.
ಚಾಹಲ್ ಅವರು ಧನಶ್ರೀ ವರ್ಮಾಗೆ 4 ಕೋಟಿ 75 ಲಕ್ಷ ರೂಪಾಯಿಗಳ ಶಾಶ್ವತ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ, ಕ್ರಿಕೆಟಿಗ ಇಲ್ಲಿಯವರೆಗೆ 2 ಕೋಟಿ 37 ಲಕ್ಷದ 55 ಸಾವಿರ ರೂಪಾಯಿಗಳನ್ನು ಮಾತ್ರ ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ಉಳಿದ ಮೊತ್ತ ಪಾವತಿಸದಿರುವುದನ್ನು ನ್ಯಾಯಾಲಯವು ‘ಪಾಲಿಸದಿರುವ ವಿಷಯ’ವೆಂದು ಪರಿಗಣಿಸಿದ್ದು, ಕೂಲಿಂಗ್-ಆಫ್ ಅರ್ಜಿಯನ್ನು ತಿರಸ್ಕರಿಸಿದೆ.
ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ 2025ನೇ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಚಾಹಲ್ ಆಡಲಿದ್ದಾರೆ. ಬಾರ್ ಮತ್ತು ಬೆಂಚ್ ಪ್ರಕಾರ, ಡಿಸೆಂಬರ್ 2020 ರಲ್ಲಿ ವಿವಾಹವಾದ ದಂಪತಿ ಜೂನ್ 2022 ರಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಈ ವರ್ಷದ ಫೆಬ್ರುವರಿಯಲ್ಲಿ ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಿದರು.
Leave a Reply